** ನಿನ್ನ ಮನೆ **
ನಿನ್ನ ಮನೆ ಇದು ನಿನ್ನ ಮನೆ
ನೀನು ಕಟ್ಟಿ ಬೆಳಸುವ ಮನೆ
ಬಾಳ ದಾರಿಯಲ್ಲಿ ಸಿಕ್ಕ ಮನೆ
ನಾವು ನೀವೆಲ್ಲ ಸೇರುವ ಮನೆ
ನಾನು ಅಥಿತಿಯಾಗಿ ಬರುವ ಮನೆ
ಅವರು ಬಂದು ಹೋಗುವ ಮನೆ
ಇವರು ಇಣುಕಿ ನೋಡುವ ಮನೆ
ಉಭಯ ಕುಶಲ ಕೇಳುವ ಒಲವ ಮನೆ
ಭಾವನೆಗಳ ಹರಿಬಿಡುವ ಮನೆ
ನೋವು ನಲಿವನು ಹಂಚುವ ಮನೆ
ಜ್ಞಾನ ರಸವ ಕುಡಿಸುವ ಮನೆ
ಅನುಭವ ಸಾರ ಉಣಿಸುವ ಮನೆ
ಹಿರಿಯ ಕಿರಿಯರಿರುವ ಮನೆ
ಮನದ ಮಾತುಗಳನ್ನಾಡುವ ಮನೆ
ನೊಂದ ಮನಸಸ್ಸಿಗೆ ಸಾಂತ್ವಾನದ ಮನೆ
ಬಿಸಿಲ ಬಯಲಿಗೆ ನೆರಳಾದ ಮನೆ
ಅರಮನೆಯಲ್ಲ ಇದು ಸಿರಿಮನೆ
ಗುಡಿಸಲಾದರು ಅಕ್ಕರೆ ತುಂಬಿದಮನೆ
ಯಾರು ಬಂದರು ಬೇಡವೆನ್ನದ ಮನೆ
ನಾವೆಲ್ಲ ಸೇರಿ ನಲಿದಾಡುವ ಮನೆ
ಮನದಂಗಳದಲ್ಲಿ ತಂಗಾಳಿ ಸುಯ್ಯುವ ಮನೆ
ನಗೆಯ ಹೂವರಳುವ ಸೊಗಸ ಮನೆ
ಬದುಕಿನ ಕಂಪು ಸೂಸಿ ಘಮಘಮಿಸುವ ಮನೆ
ಪ್ರೀತಿ-ಸ್ನೇಹದ ಕಣಜವಾಗಿರುವ ಮನೆ
ಕಟ್ಟು ನಿನ್ನ ಮನೆ ಅಕ್ಷರಗಳ ಮನೆ
ಮನಸ್ಸು ಮನಸ್ಸುಗಳಿಗೆ ಸೇತುವೆಯಾಗುವ ಮನೆ
ಅನುಭವದ ಇಟ್ಟಿಗೆಯಿಟ್ಟು ಕಟ್ಟುಗಟ್ಟಿ ಮನೆ
ಸಾಮರಸ ಸಹಬಾಳ್ವೆಯ ಅಡಿಪಾಯದಮೇಲೆ
ನಿನ್ನ ಮನೆ ಇದು ನಿನ್ನ ಮನೆ
ನಾವೆಲ್ಲ ಜೊತೆಸೇರಿ ಕಟ್ಟುವ ಮನೆ
ಮೊಳೆತು ಚಿಗಿಯುತಿರುವ ನಿನ್ನ ಮನೆ
ನಮ್ಮೆಲ್ಲರ ಸಹಕಾರದ ನೀರೆರದು ಬೆಳಸಬೇಕು ಈ ಮನೆ
** ಕುಕೂ.....
ಪುಣೆ
05/04/08
Subscribe to:
Post Comments (Atom)
3 comments:
ನಿನ್ನ ಮನೆಯೊಳಗೆಲ್ಲಾ ನಿನ್ನ ಮನದೊಳಗಿನದು ಕಂಡು ಸಂತೋಷ ವಾಯಿತು.
ಒಲವಿನಿಂದ
ಬಾನಾಡಿ
ಮನೆಯ ಸಂಪೂರ್ಣ ಭಾವಾರ್ಥದ ಕವನ ಚೆನ್ನಾಗಿದೆ..
kuvempu avaru bareda maneya bagegina ondu kavana nenapaayitu nimma kavana oaduvaaga. chennagi baredidderi:):)
Post a Comment