Saturday, August 25, 2007

ಹೊಸತನ

ಇದು ನನ್ ಮೊದಲನೇ ಬ್ಲಾಗ್ ಇದ್ರಲ್ಲಿ ಏನು ಬರೀಬೇಕು ಅಂತ ಗೊತ್ತಿಲ್ಲ.... ಅದಕ್ಕೆ ಇದನ್ನ ಹೇಗೆ ವಿನ್ಯಾಸ ಮಾಡಬೇಕು ಅಂತ ಯೋಚನೆ ಮಾಡ್ತಾ.... ವಿನ್ಯಾಸ ಮಾಡ್ತಾ ಇದಿನಿ...

7 comments:

ಕೆ. ರಾಘವ ಶರ್ಮ said...

ಚೆನ್ನಾಗಿದೆ `ನನ್ ಮನೆ'

ಸುನಿಲ್ ಹೆಗ್ಡೆ said...

ವಿನ್ಯಾಸಕನ ಆಸಕ್ತಿ ಚೆನ್ನಾಗಿರುವಂತಿದೆಯಲ್ಲ...:-)

ಹನಿ said...

ಹೌದು..ಇಲ್ಲಿ ನೀವು ವ್ಯಕ್ತ ಪಡಿಸಿರುವ ಪ್ರತಿಯೊಂದು ಅಂಶವು ನಿಜ ಜೀವನದ ಕೆಲವೊಂದು ಸಂಗತಿ.ಪ್ರತಿಯೊಬ್ಬರ ಜೀವನದಲ್ಲಿ ಇಂತಹ ಸನ್ನಿವೇಶಗಳು ಎದುರಾದಾಗ ದಿಕ್ಕು ತೋಚದಂತಾಗುತ್ತದೆ ಆಗ ಇದನ್ನು ಅಳವಡಿಸಿಕೊಂಡರೇ ಎಂತಹ ಸಮಸ್ಯೆಯೂ ಕ್ಷಣದಲ್ಲಿ ಕಳೆದುಹೋಗುತ್ತದೆ ಎನ್ನುವುದಂತೂ ನಿಜ. ನಿಮ್ಮ ಈ ಬ್ಲಾಗ್ ಓದಿದಾಗ ನನಗೆ ಸನ್ನಿವೇಶಗಳು ಕಣ್ಣ ಮುಂದೆ ಎದುರಾದಂತಿದ್ದವು. ಈ ಎಲ್ಲವನ್ನೂ ನೀವು ಅನುಭವಿಸಿಯೇ ಬರೆದಿರಬಹುದು ಎನಿಸಿತು. ನಿಮ್ಮ ವಿನ್ಯಾಸ ಬಹಳ ಅದ್ಭುತವಾಗಿದೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸದೇ ಕೊನೆಯವರೆಗೂ ಕಾದರೆ ನಮ್ಮ ಕೈಗೆ ಸಿಗುವುದೇ? ಈ ಬ್ಲಾಗ್ ಇನ್ನೂ ಒಳ್ಳೆಯ ತಿರುವು ಪಡೆಯಲಿ ಎಂದು ಆಶಿಸುತ್ತೇನೆ.


ಪವಿತ್ರ. ಎಸ್

ಚಿತ್ರಾ ಸಂತೋಷ್ said...

ಏನ್ರೀ ಇನ್ನು ಯೋಚನೆ ಮಾಡ್ತಾ ಇದ್ದೀರಿ. ಸುಮ್ಮೆ ಏನ್ ಯೋಚನೆ ಮಾಡ್ತಿರೋ ಯಾರಿಗೊತ್ತು. ಶುರು ಮಾಡಿ..

ಚಿತ್ರಾ ಸಂತೋಷ್ said...

ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ..ಎಷ್ಟು ದಿವ್ಸದಿಂದ ಯೋಚನೆ ಮಾಡೋದಪ್ಪ..ಏಳ್ರೀ ಶುರು ಮಾಡಿ ಬರೆಯೋಕೆ..ಮತ್ತೆ ಬರೆದ್ರೆ ಹಗ್ಗ ಬಿಚ್ಚಿ ಬಿಟ್ಟ ಕುದುರೆ ಥರ ಬ್ಲಾಗ್ ಓಡ್ಬೇಕು ಕಣ್ರೀ..ಧಮ್ ಅಂದ್ರೆ ಅದಪ್ಪಾ..ಏಳ್ರಿಪ್ಪಾ..ಏನಾದ್ರೂ ಬರೀರಿಪ್ಪ..ಹೊಗೆಸೊಪ್ಪು..

ನನ್ ಮನೆ said...

ನಿಮ್ ಪ್ರೋತ್ಸಾಹಕ್ಕೆ ಧನ್ಯವಾದಗಳು

ನನ್ ಮನೆ ಕಟ್ತೋದಕ್ಕೆ ನೀವೆಲ್ಲ ಇಷ್ಟೊಂದು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿರೋದು ನೋಡಿದ್ರೆ ನನ್ ಮನೆನ ದೊಡ್ಡ ಅರ್ಮನಿ ತರ ಕಟ್ಟೋಕಾದ್ದಿದ್ರೂ ಸಣ್ಣ ಗುಡಿಸಲನ್ನಾದ್ರು ಕಟ್ಟೇ ಕಟ್ತೀನಿ....

ಕುಕೂಊ.. said...

ನಿನ್ನ ಮನೆ ಕಟ್ಟಲು ನಾನು ಜೊತೆಗಿರುವೆನು
ಇಲ್ಲಿದೆ ನೋಡು ನನ್ನದೊಂದು ಇಟ್ಟಿಗೆ ಕಳಿಸಿರುವೆ
ಉಪಯೋಗಿಸು ಈ ಇಟ್ಟಿಗೆ ನಿನ್ನ ಮನೆ ಕಟ್ಟಲು
ನನ್ನ ಈ ಅಳಿಲು ಸೇವೆಗೆ ಇರಲಿ ಕನ್ನಡಮ್ಮನ ಹಾರೈಕೆ

ನಿಮ್ಮ ಮನೆ ತುಂಬಾ ಸೊಗಸಾಗೈತೆ ನಾನು ಆಗಾಗ ಬಂದು ಹೋಗುವೆ..ಚರಪು ಕೊಡುವಿರಿ ತಾನೆ??


** ನಿನ್ನ ಮನೆ **

ನಿನ್ನ ಮನೆ ಇದು ನಿನ್ನ ಮನೆ
ನೀನು ಕಟ್ಟಿ ಬೆಳಸುವ ಮನೆ
ಬಾಳ ದಾರಿಯಲ್ಲಿ ಸಿಕ್ಕ ಮನೆ
ನಾವು ನೀವೆಲ್ಲ ಸೇರುವ ಮನೆ

ನಾನು ಅಥಿತಿಯಾಗಿ ಬರುವ ಮನೆ
ಅವರು ಬಂದು ಹೋಗುವ ಮನೆ
ಇವರು ಇಣುಕಿ ನೋಡುವ ಮನೆ
ಉಭಯ ಕುಶಲ ಕೇಳುವ ಒಲವ ಮನೆ

ಭಾವನೆಗಳ ಹರಿಬಿಡುವ ಮನೆ
ನೋವು ನಲಿವನು ಹಂಚುವ ಮನೆ
ಜ್ಞಾನ ರಸವ ಕುಡಿಸುವ ಮನೆ
ಅನುಭವ ಸಾರ ಉಣಿಸುವ ಮನೆ

ಹಿರಿಯ ಕಿರಿಯರಿರುವ ಮನೆ
ಮನದ ಮಾತುಗಳನ್ನಾಡುವ ಮನೆ
ನೊಂದ ಮನಸಸ್ಸಿಗೆ ಸಾಂತ್ವಾನದ ಮನೆ
ಬಿಸಿಲ ಬಯಲಿಗೆ ನೆರಳಾದ ಮನೆ

ಅರಮನೆಯಲ್ಲ ಇದು ಸಿರಿಮನೆ
ಗುಡಿಸಲಾದರು ಅಕ್ಕರೆ ತುಂಬಿದಮನೆ
ಯಾರು ಬಂದರು ಬೇಡವೆನ್ನದ ಮನೆ
ನಾವೆಲ್ಲ ಸೇರಿ ನಲಿದಾಡುವ ಮನೆ

ಮನದಂಗಳದಲ್ಲಿ ತಂಗಾಳಿ ಸುಯ್ಯುವ ಮನೆ
ನಗೆಯ ಹೂವರಳುವ ಸೊಗಸ ಮನೆ
ಬದುಕಿನ ಕಂಪು ಸೂಸಿ ಘಮಘಮಿಸುವ ಮನೆ
ಪ್ರೀತಿ-ಸ್ನೇಹದ ಕಣಜವಾಗಿರುವ ಮನೆ

ಕಟ್ಟು ನಿನ್ನ ಮನೆ ಅಕ್ಷರಗಳ ಮನೆ
ಮನಸ್ಸು ಮನಸ್ಸುಗಳಿಗೆ ಸೇತುವೆಯಾಗುವ ಮನೆ
ಅನುಭವದ ಇಟ್ಟಿಗೆಯಿಟ್ಟು ಕಟ್ಟುಗಟ್ಟಿ ಮನೆ
ಸಾಮರಸ ಸಹಬಾಳ್ವೆಯ ಅಡಿಪಾಯದಮೇಲೆ

ನಿನ್ನ ಮನೆ ಇದು ನಿನ್ನ ಮನೆ
ನಾವೆಲ್ಲ ಜೊತೆಸೇರಿ ಕಟ್ಟುವ ಮನೆ
ಮೊಳೆತು ಚಿಗಿಯುತಿರುವ ನಿನ್ನ ಮನೆ
ನಮ್ಮೆಲ್ಲರ ಸಹಕಾರದ ನೀರೆರದು ಬೆಳಸಬೇಕು ಈ ಮನೆ

** ಕುಕೂ.....
ಪುಣೆ
05/04/08