Saturday, February 23, 2008

ಎಲ್ಲಾ ಬರೀ ಖಾಲೀ, ಖಾಲೀ...

ನನ್ನ ಗೆಳತಿ ಬರೀ ಮಾರಾಯ, ಏನೂ ಬರೀತಿಲ್ವಲ್ಲ.. ಅಂದ್ಲು ಏನು ಬರೀಲಿ.. ನನ್ನ ಮಂಡೆಯಲ್ಲಿ ಏನಿಲ್ಲ.. ಬರೀ.. ಖಾಲೀ.. ಖಾಲೀ.. ಅಂದೆ.. ಬಿಳಿ ಹಾಳೆನಾ ಹಾಕ್ಲಾ ಅಂದೆ.. ಅದಕ್ಕೆ.. ಇದನ್ನೇ ಹಾಕು.. ಚೆನ್ನಾಗಿರುತ್ತೆ ಅನ್ನೋದ.. ಅದಕ್ಕೆ ಒಂಚೂರು ಏನಾದ್ರು ಬರೆದು ಹಾಕೋಣ ಅಂತ ಪ್ರಯತ್ನ ಪಡ್ತಾ ಇದಿನಿ.. ಆದ್ರ.. ಇಗ್ಲೂ ಎಲ್ಲಾ ಖಾಲೀ.. ಖಾಲೀ..



ಬಿಳಿ ಹಾಳೆ ಹಾಕೋದ್ರಲ್ಲೂ ಒಂತರಾ ಮಜ ಇರುತ್ತೆ.. ಖಾಲೀ.. ಹಾಳೆ.. ಯಾರ್ ಏನ್ ಬೇಕಾದ್ರು.. ಬರೀಬಹುದು.. ಅಂತ..

ಇವತ್ತು ನನ್ನ ಹುಟ್ಟುಹಬ್ಬ.. ಇದೇ ವಿಶ್ಯಕ್ಕೆ ನೆನ್ನೆ ಗೆಳೆಯನ ಹತ್ರ ಮಾತಾಡ್ತಿದ್ದಾಗ "ಈನು ಹುಟ್ಟು ಹಬ್ಬ ಅಂತ ಆಚರಿಸಿಕೊಳ್ಳೋದು.. ನಮಗೆ ಇಷ್ಟು ವರ್ಷ ಆಯ್ತು.. ನಾವ್ ಏನ್ ಮಾಡಿದೀವಿ? ಅಂತ ಯೋಚನೆ ಮಾಡ್ಬೇಕು.. ನಾನು ಈಗ ಹೇಗಿದಿನಿ.. ಈ ಒಂದ್ ವರ್ಷದ್ ಹಿಂದ ಹೆಂಗಿದ್ದೆ? ಅಂತ ಯೋಚನೆ ಮಾಡ್ಬೇಕು..." ಅಂತ ಹೇಳಕತ್ತಿದ್ದೆ ಅವ್ನಿಗೆ.. ಆದರ ಒಮ್ಮೊಮ್ಮೆ ಅನ್ನಸ್ತತಿ ನಾನ್ ಇಷ್ಟರ ಬೆಳದ್ ಬಂದನಲ... ಇಷ್ಟ ಇದ್ರ ಸಾಲ್ದು ಇನ್ನೂ ಬೆಳಿಬಕು. ನಮ್ಮನ್ನು ಜನ ಗುರುತಿಸ್ಬೇಕು.. ಅಯ್ಯೋ.. ಹೀಗೇ ನೋಡ್ರಿ ಏನೋ. ಬರಿಯಣ ಅಂತ ಕೂತ್ರ ಹಿಂಗ ಏನೇನೋ. ಯೋಚನಿ ಬರ್ತವು.. ಆದ್ರ ಏನ್ ಬರೀಲಿ ಎಲ್ಲಾ ಬರೀ ಖಾಲೀ, ಖಾಲೀ...

Sunday, February 17, 2008

ನಿಮ್ ಪ್ರೋತ್ಸಾಹಕ್ಕೆ ಧ್ಯನವಾದಗಳೂ

ನನ್ ಮನೆ ಕಟ್ತೋದಕ್ಕೆ ನೀವೆಲ್ಲ ಇಷ್ಟೊಂದು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿರೋದು ನೋಡಿದ್ರೆ ನನ್ ಮನೆನ ದೊಡ್ಡ ಅರ್ಮನಿ ತರ ಕಟ್ಟೋಕಾದ್ದಿದ್ರೂ ಸಣ್ಣ ಗುಡಿಸಲನ್ನಾದ್ರು ಕಟ್ಟೇ ಕಟ್ತೀನಿ....